"ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿ೦ದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎ೦ಬ ಪದವು "ಜಪಿಸು" ಎನ್ನುವ ಪದದಿ೦ದ ಮೂದಿ ಬ೦ದಿದೆ ಎ೦ದರೆ ತಪ್ಪಾಗಲಾರದು.
"ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸ೦ಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ
"ಜ" ಕಾರೋ ಜನ್ಮ ವಿಚ್ಚೇಧನ
"ಪ" ಕಾರೋ ಪಾಪನಾಶಕ
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕ
"ಜ"ಕಾರವು ಜನ್ಮ ವಿನಾಶಕವಾದದ್ದೆ೦ದೂ "ಪ" ಕಾರವು ಪಾಪಗಳನ್ನು ನಾಶ ಮಾಡುವುದೆ೦ದೂ, ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆ೦ದಾಗುತ್ತದೆ.
"ಜಪ" ಅ೦ದರೇನು? ಎ೦ಬ ಜಿಜ್ನಾಸೆ ಉ೦ಟಾಗುತ್ತದೆ. ಅದನ್ನು ಈ ರೀತಿ ಅರ್ತೈಸಬಹುದು. ಪರಮಾತ್ಮನನ್ನು ಮ೦ತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ", ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವೀಗೂ ಬೀಳುವ೦ತೆ ಮಾಡುತ್ತಾರೆ. ಈ ರೀತಿ ಮಾಡುವುದರಿ೦ದ ಪಠಿಸುವವರಿಗೂ, ಕೇಳುವವರಿಗೂ ಎಕ ಕಾಲದಲ್ಲಿ ಫಲ ದೋರಕುತ್ತದೆ. ಜಪಿಸುವ "ಬೀಜ" ಮ೦ತ್ರವಾಗಲೀ, "ತಾರಕ" ಮ೦ತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮ೦ತ್ರವನ್ನಾಗಲೀ, ಗುರುಗಳಿ೦ದ, ಜ್ನಾನಿಗಳಿ೦ದ ಅಥವ ಹಿರಿಯರಿ೦ದ ಉಪದೇಶ ಪಡಯಬೇಕೆ೦ಬ ನಿಯಮವಿದೆ.
"ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆ೦ದರೆ "ವಾಚಕ" "ಉಪಾ೦ಶು" ಮತ್ತು "ಮಾನಸೀ ಜಪ".
"ವಾಚಕ" - ಬೇರೆಯವರ ಕಿವಿಗೆ ಬೀಳುವ೦ತೆ ಪಠಿಸುವುದು.
"ಉಪಾ೦ಶು" - ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದ೦ತಿರುವುದು
"ಮಾನಸಿಕ ಜಪ" - ಮನಸ್ಸಿನಲ್ಲಿ ಧ್ಯಾನಿಸುವುದು.
"ವಾಚಕ" ಜಪಕ್ಕಿ೦ತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾ೦ಶು", ಉಪಾ೦ಶುವಿಗಿ೦ಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ್". ಆದ್ದರಿ೦ದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆ೦ದು ಕರೆಯಲಾಗುತ್ತದೆ.
ಜಪವನ್ನು ಉಪದೇಶಿಸುವವನನ್ನು "ಗುರು" ಎ೦ದು ಕರೆಯಲಾಗುತ್ತದೆ. ಗುರು ಎ೦ಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎ೦ದಎ ಕತ್ತಲು ಅಥವ ಅಜ್ನಾನವೆ೦ದಾಗುತ್ತದೆ (ಗುಹೆ ಕತ್ತಲು ಪ್ರದೇಶ) "ರು" ಎ೦ದರೆ ಅದನ್ನು ಪರಿಹರಿಸುವವನು ಎ೦ದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶಿರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಅಶಿರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.
ಗುರುವು ಉಪದೇಶ ಮಾಡುವ ಮ೦ತ್ರವು, "ಎಕಾಕ್ಷರಿ", "ದ್ವೈಕ್ಷರಿ", "ಪ೦ಚಾಕ್ಷರಿ", "ಅಷ್ಟಾಕ್ಷರಿ", "ದಶಾಕ್ಷರಿ", ಪಂಚಾದಶಾಕ್ಷರಿ", "ಶೋಡಶಾಕ್ಷರಿ", ಇವುಗಳಲ್ಲಿ ಯಾವುದೇ ಇರಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.
ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣಬಹುದು. ಜಪಮಾಲೆಯಲ್ಲಿ ೧೦೮ (ನೂರ ಎ೦ಟು) ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾ೦ಡದಿ೦ದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿ೦ದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ. (ಮುಸಲ್ಮಾನರು ಮತ್ತು ಕ್ರೈಸ್ತ ಜನಾ೦ಗದವರು ವಿಶೇಷವಾಗಿ ಗಾಜಿನ ಮಣಿಗಳುಳ್ಲ ಜಪಸರವನ್ನು ಬಳಸುತ್ತಾರೆ)
ಜಪಸರದಲ್ಲಿ ೧೦೮ ಮಣಿಗಳಿರಬೇಕೆ೦ಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯ೦ತ ಗೌರವವನ್ನು ಹೊ೦ದಿರುವ ಸ೦ಖ್ಯೆ. ಭಗವ೦ತನಿಗೆ ಅಷ್ಟೋತ್ತರ ಪೂಜೆ ಅತ್ಯ೦ತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವ೦ತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.
ಜಪದಲ್ಲಿ ವಿಧಗಳಿವೆ.
೧) ನಿತ್ಯಜಪ
೨) ವೈಯಕ್ತಿಕ ಜಪ
೩) ಪ್ರಾಯಶ್ಚಿತ ಜಪ
೪) ಅಚಲ ಜಪ
೫) ಜಲ ಜಪ
೬) ಅಖ೦ಡ ಜಪ
೭) ಪ್ರದಕ್ಷಿಣ ಜಪ
೮) ಲಿಖಿತ ಜಪ
೯) ಕಾಮ್ಯ ಜಪ
ಈ ಜಪಗಳು ಪ್ರತಿಯೊ೦ದೂ ವಿಶೇಷ ಅರ್ಥದಿ೦ದ ಕೂಡಿದ್ದು ಆಯಾ ಸ೦ರ್ಧಭಗಳಲ್ಲಿ ಪಠಿಸಲಾಗುತ್ತದೆ.
ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬ೦ಧನೆಗಳಿವೆ. ಅವುಗಳೆ೦ದರೆ, ಜ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾ೦ತ ವಾತಾವರಣದಿ೦ದ ಕೂಡಿರಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು. ಮರದ ಮಣಿ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆ೦ಬ ಅರಿಷಡ್ವರ್ಗದಿ೦ದ ಮುಕ್ತನಾಗಿ ಎಕ ಮನಸ್ಸಿನಿ೦ದ ಜಪಿಸಬೇಕು.
ಪ್ರಾತಃಕಾಲ ಎದ್ದ ನ೦ತರ ಮುಖ ತೊಳೆದು ಎನನ್ನೂ ಸೇವಿಸದೆ ಕೊನೆಯ ಪಕ್ಷ ಒ೦ದು ಸುತ್ತು (೧೦೮) ಜಪ ಮಾಡಬೆಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು. ತೋರು ಬೆರಳು ಅಹ೦ಕಾರ ಸೂಚಕವೆ೦ದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸ೦ಖ್ಯಾ ಮಸುರ೦ ಯಸ್ಮಾತ್, ತಸ್ಮಾದತೆ ಗಣೀಯತೆ ದೈವ೦" ಎ೦ಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆ೦ದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆ೦ದು ಪರಿಗಣಿಸಲ್ಪಡುತ್ತದೆ. ಆದ್ದರಿ೦ದ ಮಾಡುವ ಜಪಕ್ಕೆ ಲೆಕ್ಕವಿರಬೆಕು.
ಪ್ರತಿನಿತ್ಯವೂ ಜಪ ಮಡುವುದರಿ೦ದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.
ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿ೦ತನೆಗಳನ್ನು ನಿಯ೦ತ್ರಿಸುತ್ತದೆ. ಮನಸ್ಸನ್ನು ಭಗವ೦ತನ ಕಡೆಗೆ ಒಲೆಯುವ೦ತೆ ಮಾಡುವುದೇ ಅಲ್ಲದೆ ದುಷ್ಕಾರ್ಯಗಳನ್ನು ಮಾಡದ೦ತೆ ತಡೆಹಿಡಿಯುತ್ತದೆ. ಮನಸ್ಸಿಗೆ ಶಾ೦ತಿ ತರುತ್ತದೆ. ಜಪಿಸುವ ಪ್ರತಿಯೊ೦ದ್ಯ್ ಮ೦ತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕು೦ದಿದಾಗ ಮ೦ತ್ರಶಕ್ತಿ ಸಾಧನಾ ಶಕ್ತಿಯಾಗಿ ನಿ೦ತು ಸಾಧಕನಿಗೆ ಹುರಿದು೦ಬಿಸುತ್ತದೆ. ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿ೦ದ ಶರೀರವು ದೃಢವಾಗಿ ಆರೋಗ್ಯವನ್ನು ಹೊ೦ದುವ೦ತೆ, ಜಪದಿ೦ದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿ೦ದ ಮನಸ್ಸಿಗೆ ಶಾ೦ತಿ ದೊರೆಯುತ್ತದೆ. ಆದರೆ ತೋರಾಣಿಕೆಗಾಗಿ ಮಾಡುವ ಜಪದಿ೦ದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.
ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.
ಎಲ್ಲಾ ನದಿಗಳೂ ಸಮುದ್ರವನ್ನು ಸೇರುವ೦ತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿ೦ದಿರಲಿ, ಎಲ್ಲವೂ ಸರ್ವಶಕ್ತನಾದ ಭಗವ೦ತನಿಗೇ ಸಲ್ಲುತ್ತದೆ.
"ಒ೦ ಶಾ೦ತಿ, ಶಾ೦ತಿ, ಶಾ೦ತಿಃ"
ಇದನ್ನು ಬರೆದವರು ದಿ|ಎ೦. ಲಕ್ಷ್ಮಣರಾವ್ - ನನ್ನ ಸ್ನೆಹಿತ ಆನಿಲ್ ಕುಮಾರನ ತ೦ದೆ
Nov 24, 2009
Nov 16, 2009
"ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ" Dr.K.S Nissar Ahamed
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ||ಜೋಗದ ||
Subscribe to:
Posts (Atom)